ಗುರುವಾರ, ಏಪ್ರಿಲ್ 9, 2009

ನಗೂನಗೂನಗೂನಗೂನಗೂ

ಗೆಳೆಯ ರಾಹುಲ್ ಅಡ್ಪಂಗಾಯ ಅವನ ಮೊಬೈಲ್ ನಲ್ಲಿ ಸೆರೆಹಿಡಿದಿರೋ ಚಿತ್ರ. ಈ ಚಿತ್ರದಲ್ಲಿ ಕಾಣೋ ಮಕ್ಕಳು ಹೆಗಲ ಮೇಲೆ ಕೈ ಹಾಕ್ಕೊಂಡು ಹಲ್ಲು ಬಿಟ್ಕೊಂಡು ನಗ್ತಾ ಫೋಸು ಕೊಟ್ಟಿದ್ದು ವಿಶೇಷವಾಗಿ ನನ್ನ ಗಮನ ಸೆಳೆಯಿತು ಮತ್ತು ತುಂಬಾ ಇಷ್ಟವಾಯಿತು. ಇದನ್ನ ನೋಡ್ತಾ ಇದ್ರೆ ಕಳೆದು ಹೋದ ಜೀವನದ ಕ್ಷಣ ನೆರೆದು ಚಿಗುರುತ್ತದೆ. ಮತ್ತದೇ ನೆನಪುಗಳು ಮರುಕಳಿಸುತ್ತವೆ ಬದುಕು ಹಿಂದೆ ಹೋದಂತೆ ಭಾಸವಾಗುತ್ತದೆ...

ಭಾನುವಾರ, ಏಪ್ರಿಲ್ 5, 2009

ಬಿಳಿಚಿಕೊಂಡಿಹೆ ಉಸಿರಿಲ್ಲದೆ

ಲಾಲ್ ಬಾಗ್ ಕೆರೆಯಲ್ಲಿನ ದೃಶ್ಯ, ಎಲೆಗಳಿಲ್ಲದ ಬಿಳಿಚಿಕೊಂಡಿರುವ ಮರ ಯಾಕೋ ಗಮನ ಸೆಳೆಯಿತು

ಬೆಳ್ಳಿ ರಥದಲೀ...


ಬೆಂಗಳೂರಿನ ನನ್ನ ಬಾಡಿಗೆ ಮನೆ ಮುಂದೆ ಆಕಾಶ ದಿಟ್ಟಿಸಿದಾಗ ಕಂಡಿದ್ದು

ಶನಿವಾರ, ಏಪ್ರಿಲ್ 4, 2009

ಕೆರೆ ನೀರೊಳಗೊಂದು ಆಲಯ


ಇದು ಕುಂಬ್ಳೆ ಸಮೀಪದ ಅನಂತಪುರ ದೇವಸ್ಥಾನದಲ್ಲಿನ ಚಿತ್ರ. ಕೆರೆ ಮಧ್ಯದಲ್ಲಿ ಗುಡಿಯಿರುವುದು ಇಲ್ಲಿನ ವೈಶಿಷ್ಟ್ಯಗಳಲ್ಲಿ ಒಂದು, ಕೆರೆ ನೀರೊಳಗೆ ತಾವರೆ ಎಲೆಗಳ ಮಧ್ಯೆ ಗುಡಿಯ ಗೋಪುರದ ಪ್ರತಿಬಿಂಬ ನನ್ನ ಕ್ಯಾಮರಾದ ಅಕ್ಷಿಪಟಲದೊಳಗೆ ಹೀಗೆ ಸೆರೆಯಾಯಿತು.

ಮಹೇಶ್ ಪಿ. ಎಡಕ್ಕಾನ

ಮಹೇಶ್ ಪಿ. ಎಡಕ್ಕಾನ
ಫೋಟೋಗ್ರಫಿ ಹವ್ಯಾಸ, ಸಂಗೀತ ಆಲಿಕೆ, ಸಿನಿಮಾ ವೀಕ್ಷಣೆ, ಓದು, ಬರವಣಿಗೆ ಅಭ್ಯಾಸ...

  © Blogger template 'Blue Greens' by Ourblogtemplates.com 2008

Back to TOP